Category: Karwar

SWEEP-2026 ಜಾಗೃತಿ ಮೆರವಣಿಗೆಗೆ ಜಿ.ಪಂ CEO ಚಾಲನೆ; ದೋಷರಹಿತ ಮತದಾರರ ಪಟ್ಟಿಗೆ ಅಧಿಕಾರಿಗಳ ಕರೆ

ಕಾರವಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ–2026ರ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ 'ಸ್ವೀಪ್' ಮತದಾರರ ಜಾಗೃತಿ ಮೆರವಣಿಗೆಗೆ ಜಿಲ್ಲಾ ಪಂಚಾಯತ್ ಸಿಇಓ ಡಾ. ದಿಲೀಶ್ ಶಶಿ ಅವರು ಚಾಲನೆ ನೀಡಿದರು. ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಉಪಸ್ಥಿತರಿದ್ದರು.

Karwar ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ವಕೀಲ ನಾಗರಾಜ ನಾಯಕ ಆಯ್ಕೆ

ಕಾರವಾರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ ಜಿಲ್ಲಾ ವಕೀಲರ ಸಂಘದ ಚುನಾವಣೆಯಲ್ಲಿ ಹಿರಿಯ ವಕೀಲ ನಾಗರಾಜ ನಾಯಕ ಅವರು ನೂತನ ಅಧ್ಯಕ್ಷರಾಗಿ ಬಹುಮತದಿಂದ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ನಾಗರಾಜ ದೇಶಭಂಡಾರಿ ಜಯಗಳಿಸಿದ್ದಾರೆ.

ಚಿತ್ತಾಕುಲಾ ವ್ಯಾಪ್ತಿಯ ಎರಡು ದೇವಸ್ಥಾನಗಳಲ್ಲಿ ಕಳ್ಳರ ಕೈಚಳಕ: ಹಿತ್ತಾಳೆ ದೀಪ, ಪೂಜಾ ಸಾಮಗ್ರಿಗಳ ಕಳವು!

ಕಾರವಾರ ತಾಲೂಕಿನ ಚಿತ್ತಾಕುಲಾ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಪ್ರತ್ಯೇಕ ದೇವಸ್ಥಾನಗಳಲ್ಲಿ ಸಾವಿರಾರು ರೂಪಾಯಿ ಮೌಲ್ಯದ ಬೆಲೆಬಾಳುವ ಹಿತ್ತಾಳೆ ದೀಪ ಹಾಗೂ ಪೂಜಾ ಸಾಮಗ್ರಿಗಳನ್ನು ಕಳವು ಮಾಡಿರುವ ಘಟನೆಗಳು ವರದಿಯಾಗಿವೆ.

ದೇವಸ್ಥಾನಗಳ ಗಂಟೆಗಳ ಮೇಲೆ ಖದೀಮರ ಕಣ್ಣು! ಮೂರು ಕಡೆ ಲಕ್ಷಾಂತರ ಮೌಲ್ಯದ ಹಿತ್ತಾಳೆ ಗಂಟೆ, ದೀಪ ಕಳವು

ಕಾರವಾರ ತಾಲೂಕಿನಾದ್ಯಂತ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ನಗರ ಮತ್ತು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಮೂರು ಪ್ರತ್ಯೇಕ ದೇವಸ್ಥಾನಗಳಲ್ಲಿ ಲಕ್ಷಾಂತರ ಮೌಲ್ಯದ ಹಿತ್ತಾಳೆ ಗಂಟೆಗಳು ಹಾಗೂ ದೀಪಗಳನ್ನು ಕಳವು ಮಾಡಲಾಗಿದೆ.

Goa ಸಮೀಪ ಸಮುದ್ರದಲ್ಲಿ ಕಾರವಾರದ ಪರ್ಸಿನ್ ಬೋಟ್ ಮುಳುಗಡೆ: 22 ಮೀನುಗಾರರ ರಕ್ಷಣೆ!

ಕಾರವಾರ: ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಕಾರವಾರ ಮೂಲದ ಪರ್ಸಿಯನ್ ಬೋಟ್ ಒಂದು ಗೋವಾದ ಬೇತುಲ್ ಸಮುದ್ರ ಪ್ರದೇಶದಲ್ಲಿ ಏಕಾಏಕಿ ಮುಳುಗಡೆಯಾಗಿದ್ದು, ಬೋಟ್‌ನಲ್ಲಿದ್ದ 22 ಮೀನುಗಾರರನ್ನು ಮತ್ತೊಂದು ಬೋಟ್‌ನ ಸಿಬ್ಬಂದಿ ಸಾಹಸಪಟ್ಟು ರಕ್ಷಿಸಿದ್ದಾರೆ. ಭಾನುವಾರ ಸಂಜೆ ಈ ಅವಘಡ ಸಂಭವಿಸಿದೆ. ಉತ್ತರ…