ಅಂಕೋಲಾ: ದೇಶಾದ್ಯಂತ ಲೈಂಗಿಕ ಕಿರುಕುಳ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಶಾಲಾ-ಕಾಲೇಜುಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ಮಾತ್ರ ವಿದ್ಯಾರ್ಥಿ ಹಾಗೂ ಶಿಕ್ಷಕರ ಬಾಂಧವ್ಯಕ್ಕೆ ಕುಂದುಂಟಾಗುತ್ತಿದೆ. ಅದರಂತೆಯೇ ಅಂಕೋಲಾ ತಾಲೂಕಿನ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕನೋರ್ವ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದು,ಸ್ವತಃ ವಿದ್ಯಾರ್ಥಿನಿಯೇ ಧೈರ್ಯದಿಂದ ಉಪನ್ಯಾಸಕನ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ.

ಹೌದು…ಅದೇ ಕಾಲೇಜಿನ ಕಂಪ್ಯೂಟರ್ ವಿಬಾಗದ ಉಪನ್ಯಾಸಕ ರಾಮಚಂದ್ರ ಅಂಕೋಲೆಕರ್ ಎಂಬಾತನೇ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಉಪನ್ಯಾಸಕನಾಗಿದ್ದು, ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ ಹಾಗೂ ಮೊಬೈಲ್ ಗಳಲ್ಲಿ ಸಂದೇಶಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ ಈ ಕುರಿತು ಅಂಕೋಲಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಉಪನ್ಯಾಸಕನನ್ನು ಕೂಡಲೇ ಅಮಾನತ್ತು ಮಾಡಬೇಕೆಂದು ಪೋಷಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಪೋಷಕರು ಮಂಗಳವಾರ ಕಾಲೇಜು ಬಳಿ ತೆರಳಿ ಉಪನ್ಯಾಸಕ ಹಾಗೂ ತಿಂಗಳುಗಳು ಕಳೆದರು ಕ್ರಮ ಕೈಗೊಳ್ಳದೇ,ಆಡಳಿತ ಮಂಡಳಿಯ ಗಮನಕ್ಕೂ ತಾರದೆ ಪ್ರಾಚಾರ್ಯರು ನಿರ್ಲಕ್ಷ್ಯವಹಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಳಿ ತೆರಳಿದ ನೂರಾರು ಸಂಖ್ಯೆಯಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳು ಸ್ಥಳಕ್ಕೆ ಆಡಳಿತ ಮಂಡಳಿ ಬರಬೇಕೆಂದು ಒತ್ತಾಯಿಸಿದರು,ನಂತರ ಆಡಳಿತ ಮಂಡಳಿಯ ಉಪಾಧ್ಯಕ್ಷ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಶ್ವರ ನಾಯಕ ಅಗಮಿಸುತ್ತಲೇ ಲೈಂಗಿಕ ಕಿರುಕುಳ ನೀಡಿದ ಉಪನ್ಯಾಸಕ ರಾಮಚಂದ್ರ ಅಂಕೋಲೆಕರ್ ಹಾಗೂ ಕ್ರಮ ಕೈಗೊಳ್ಳದ ಪ್ರಾಚಾರ್ಯರನ್ನು ಕೂಡಲೇ ಅಮಾನತ್ತು ಮಾಡುವಂತೆ ಪಟ್ಟು ಹಿಡಿದರು ಎನ್ನಲಾಗಿದೆ.

ಈ ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ವಿನಂತಿಸಿದ ಆಡಳಿತ ಮಂಡಳಿ ಉಪಾಧ್ಯಕ್ಷ ಮಂಜೇಶ್ವರ ನಾಯಕ ಆಡಳಿತ ಮಂಡಳಿಯ ಸಭೆ ನಡೆಸಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದಂತ ಉಪನ್ಯಾಸಕ ಹಾಗೂ ಆಡಳಿತ ಮಂಡಳಿಯ ಗಮನಕ್ಕೆ ತಾರದೆ ಪ್ರತಿಭಟನೆ ಇಷ್ಟೊಂದು ಉಗ್ರ ರೂಪಕ್ಕೆ ತಾಳುವಂತೆ ಮಾಡಿದ ಪ್ರಾಚಾರ್ಯರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಪ್ರಿನ್ಸಿಪಾಲ್ ವಿರುದ್ಧ ಕೆಂಡಾಮಂಡಲ!
ಲೈಂಗಿಕ ಕಿರುಕುಳ ಹಾಗೂ ವಿದ್ಯಾರ್ಥಿನಿಗೆ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದ ಉಪನ್ಯಾಸಕನ ವಿರುದ್ಧ ಪ್ರಾಚಾರ್ಯರ ಬಳಿ ತೆರಳಿ ಆರೋಪ ಮಾಡಿದರು ಸಹ ಯಾವುದೇ ಕ್ರಮ ಕೈಗೊಳ್ಳದೇ ಆಡಳಿತ ಮಂಡಳಿಯ ಗಮನಕ್ಕೆ ತರದೆ,ಅಹಂಕಾರ ಮೆರೆಯುತ್ತಿದ್ದ ಪ್ರಾಚಾರ್ಯೆ ವಿಜಯಾ ಪಾಟೀಲ್ ವಿರುದ್ಧ ಹಲವಾರು ವಿದ್ಯಾರ್ಥಿಗಳು ಹಾಗೂ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು ಹಾಗೆಯೇ ಸೋಮವಾರ ಸಾಯಂಕಾಲ 7 ಗಂಟೆಯ ವರೆಗೆ ನೊಂದ ವಿದ್ಯಾರ್ಥಿನಿಯನ್ನು ಕಾಲೇಜಿನಲ್ಲಿ ಕೂರಿಸಿ ಅವಳ ಮೊಬೈಲ್ ಅನ್ನು ಕಸಿದು ಇಟ್ಟುಕೊಂಡು ಮನವೊಲಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದ್ದು ಈ ಕುರಿತು ಪ್ರತಿಭಟನಾಕಾರರು ಪ್ರಾಚಾರ್ಯರನ್ನು ತರಾಟೆಗೆ ತೆಗೆದುಕೊಂಡರು.

ಕಾಲೇಜು ಅವಧಿ ಮುಗಿದ್ರು ಪ್ರಾಚಾರ್ಯೆ ವಿದ್ಯಾರ್ಥಿನಿಯನ್ನು ಇಟ್ಟುಕೊಂಡಿದ್ದೇಕೆ?
ಲೈಂಗಿಕ ಕಿರುಕುಳ ಪ್ರಕರಣ ತೀವೃ ಸ್ವರೂಪ ಪಡೆಯುತ್ತಿದ್ದಂತೆ ಎಚ್ಚೆತ್ತ ಪ್ರಿನ್ಸಿಪಾಲ್ ವಿಜಯಾ ಪಾಟೀಲ್ ನೊಂದ ವಿದ್ಯಾರ್ಥಿನಿಯನ್ನು ಕರೆಯಿಸಿಕೊಂಡು ಕಾಲೇಜು ಅವಧಿ ಮುಗಿದರೂ ಸಾಯಂಕಾಲ 7 ಗಂಟೆಯವರೆಗೂ ಆಕೆಯ ಮೊಬೈಲ್ ಬಳಸಲು ಅವಕಾಶ ನೀಡದೆ ಅಲ್ಲಿ ಇಟ್ಟುಕೊಂಡದ್ದು ಯಾಕೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದು, ಕಾಲೇಜು ಅವಧಿ ಮುಗಿದ ಮೇಲೆ ವಿದ್ಯಾರ್ಥಿಗಳನ್ನು ಕಾಲೇಜಿನಲ್ಲಿ ಇಟ್ಟುಕೊಳ್ಳಬಹುದೇ? ಅದಲ್ಲದೆ ಈ ಪ್ರಕರಣದ ಬಗ್ಗೆ ಆಡಳಿತ ಮಂಡಳಿಯ ಗಮನಕ್ಕೆ ಏಕೆ ತರಲಿಲ್ಲ? ಲೈಂಗಿಕ ಕಿರುಕುಳ ಆರೋಪ ಹೊತ್ತ ಉಪನ್ಯಾಸಕನನ್ನು ಕಾಪಾಡುವ ಹುನ್ನಾರವೇ ಎನ್ನುವ ಪ್ರಶ್ನೆ ಕೇಳಿಬಂದಿದ್ದು,ಆದ್ದರಿಂದ ಇಂದು ಪಾಲಕ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು ಪ್ರಾಚಾರ್ಯರನ್ನು ಕೇಳಿದಾಗ ಒಂದು ಹುಡುಗಿಯ ಖಾಸಗಿ ವಿಚಾರವನ್ನು ಎಲ್ಲಿಯೂ ಹೊರಬರಬಾರದು,ಆದ್ದರಿಂದ ಈ ವಿಚಾರವನ್ನು ಎಲ್ಲಿಯೂ ತಿಳಿಸಲಿಲ್ಲ ಎನ್ನುವ ಹಾರಿಕೆ ಉತ್ತರ ನೀಡಿದ್ದು, ಲೈಂಗಿಕ ಕಿರುಕುಳದ ವಿರುದ್ಧ ಸ್ವತಃ ವಿದ್ಯಾರ್ಥಿನಿಯೇ ಮತ್ಯಾರಿಗೂ ಈ ರೀತಿಯ ಕಿರುಕುಳ ವಾಗಬಾರದು ಎನ್ನುವ ದೃಷ್ಟಿಯಿಂದ ಧೈರ್ಯದಿಂದ ಎಲ್ಲರ ಗಮನಕ್ಕೆ ತಂದಿದ್ದು ಇದರಲ್ಲಿ ಖಾಸಗೀತನ ಎಲ್ಲಿಂದ ಬಂತು ಎನ್ನುವ ಪ್ರಶ್ನೆ ಎದುರಾಗಿದೆ.
ಮೀನುಗಾರರು ಮುಗ್ದರು ಹೌದು.. ಹೋರಾಟಗಾರರು ಹೌದು..
ಕಡಲನ್ನು ನಂಬಿ ತಮ್ಮ ಪಾಡಿಗೆ ತಾವು ಮೀನುಗಾರಿಕೆ ನಡೆಸಿ ಪ್ರತಿನಿತ್ಯ ಶ್ರಮಿಸಿ ಹೊಟ್ಟೆ ಬಟ್ಟೆ ಕಟ್ಟಿಕೊಳ್ಳುತ್ತಿರುವ ಮೀನುಗಾರ ಸಮುದಾಯ ಮುಗ್ದರು ಹೌದು..ತಮ್ಮವರಿಗೆ ನೋವು ಎಂದಾಕ್ಷಣ ಒಕ್ಕೊರಲಿನಿಂದ ಹೋರಾಡಿ ನ್ಯಾಯ ಒದಗಿಸಿಕೊಳ್ಳುವ ಹೋರಾಟಗಾರರು ಹೌದು. ಅದರಂತೆಯೇ ಇಂದು ಅನ್ಯಾಯಕ್ಕೊಳಗಾದ ಒಂದು ಹೆಣ್ಣಿನ ಪರವಾಗಿ ನಿಲ್ಲಲು ಕೆಲಸ ಕಾರ್ಯಗಳನ್ನು ಬಿಟ್ಟು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಅನ್ಯಾಯದ ವಿರುದ್ಧ ಹೋರಾಡಿದ್ದು ಮಾದರಿಯಾಗಿದೆ.














Leave a Reply