ಅಂಕೋಲಾ:ಪುರಸಭೆ ಮುಖ್ಯಾಧಿಕಾರಿ ಅಕ್ಷತಾ ಎಚ್ ಅಮಾನತ್ತು ಆದೇಶ ಬರುತ್ತಿದ್ದಂತೆಯೇ ಹೊನ್ನಾವರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಯೇಸು ಸುಬ್ಬಣ್ಣ ಬೆಂಗಳೂರು ಅವರನ್ನು ಪ್ರಬಾರಿ ಮುಖ್ಯಾಧಿಕಾರಿಯಾಗಿ ನೇಮಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದ ಹಿನ್ನೆಲೆ ಮಂಗಳವಾರ ಅವರು ಅಧಿಕಾರ ಸ್ವೀಕರಿಸಿದರು.

ನೂತನ ಮುಖ್ಯಾಧಿಕಾರಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡ ಪುರಸಭೆ ಜನಪ್ರತಿನಿಧಿಗಳು!
ಹಿಂದಿನ ಮುಖ್ಯಾಧಿಕಾರಿ ಅಕ್ಷತಾ ಎಚ್ ಅವರ ಅಮಾನತ್ತಾದ ಹಿನ್ನೆಲೆಯಲ್ಲಿ ಪ್ರಬಾರಿ ಮುಖ್ಯಾಧಿಕಾರಿಯಾಗಿ ಬಂದ ಯೇಸು ಸುಬ್ಬಣ್ಣ ಬೆಂಗಳೂರು ಇವರನ್ನು ಪುರಸಭೆ ಜನಪ್ರತಿನಿಧಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ಅಧ್ಯಕ್ಷರಾದ ಸೂರಜ್ ಎಂ ನಾಯ್ಕರನ್ನು ಭೇಟಿ ಮಾಡಿದ ಮುಖ್ಯಾಧಿಕಾರಿ ಯೇಸುರವರು ಅಭಿವೃದ್ಧಿ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಜಯಾ ನಾಯ್ಕ, ಅಶೋಕ್ ಶೇಡಗೇರಿ,ವಿಶ್ವನಾಥ ನಾಯ್ಕ,ಶ್ರೀಧರ್ ನಾಯ್ಕ,ಜಯಪ್ರಕಾಶ್ ನಾಯ್ಕ,ತಾರಾ ನಾಯ್ಕ,ಮಂಗೇಶ್ ಆಗೇರ,ನಾಗಪ್ಪ ಗೌಡ,ಶಬ್ಬೀರ್ ಶೇಖ್ ಮುಂತಾದವರು ಉಪಸ್ಥಿತರಿದ್ದರು.

ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ಥಗಿತವಾಗಿದ್ದ ಕಾರ್ಯವನ್ನು ಮಾಡುತ್ತೇವೆ ಹಾಗೆಯೇ ಅಂಕೋಲಾ ಪುರಸಭೆಯನ್ನು ಮಾದರಿ ಪುರಸಭೆಯನ್ನಾಗಿ ಮಾಡಲು ಶ್ರಮಿಸುತ್ತೇನೆ. ನನಗೆ ಅಂಕೋಲಾ ಪುರಸಭೆ ಹೆಚ್ಚುವರಿಯಾಗಿ ಹೊಣೆ ಇರುವುದರಿಂದ ನನ್ನಿಂದ ಆದಷ್ಟು ಹೆಚ್ಚಿನ ಸೇವೆಯನ್ನು ಒದಗಿಸಲು ಪ್ರಯತ್ನಿಸಿಸುತ್ತೇನೆ.
ಯೇಸು ಎಸ್ ಬೆಂಗಳೂರು
ಪ್ರಭಾರಿ ಮುಖ್ಯಾಧಿಕಾರಿಗಳು ಅಂಕೋಲಾ














Leave a Reply