ಅಂಕೋಲಾ: ಪುರಸಭೆ ಜನಪ್ರತಿನಿಧಿಗಳ ಅಧಿಕಾರಾವಧಿ ಮುಕ್ತಾಯದ ಕುರಿತು ಜಿಲ್ಲಾಧಿಕಾರಿಗಳಿಗೆ ಆಗಿನ ಮುಖ್ಯಾಧಿಕಾರಿ ಅಕ್ಷತಾ ಎಚ್ ತಪ್ಪು ಮಾಹಿತಿ ನೀಡಿದ್ದಾರೆ ಎನ್ನುವ ಮಾಹಿತಿ ತಿಳಿಯುತ್ತಿದ್ದಂತೆ ಪುರಸಭೆಯ ಜನಪ್ರತಿನಿಧಿಗಳು ಮುಖ್ಯಾಧಿಕಾರಿಯ ವಿರುದ್ಧ ಚುನಾವಣಾ ಆಯೋಗಕ್ಕೆ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ದಾಖಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಹೌದು…ಪುರಸಭೆಯ ಆಡಳಿತ ಮಂಡಳಿಯ ಅಧಿಕಾರಾವಧಿ ಕುರಿತು ಯೋಜನಾ ನಿರ್ದೇಶಕರು ಮಾಹಿತಿ ನೀಡಿವಂತೆ ಮುಖ್ಯಾಧಿಕಾರಿಗಳಿಗೆ ಕೇಳಿದ್ದು, ಜಿಲ್ಲಾಧಿಕಾರಿಯವರಿಗೆ ಹಾಗೂ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿಯನ್ನು ನೀಡಿದ್ದಾರೆ ಎಂದು ಅಂಕೋಲಾ ಪುರಸಭೆ ಜನಪ್ರತಿನಿಧಿಗಳು ದೂರಿದ್ದಾರೆ.ಅದರಂತೆಯೇ ಮುಖ್ಯಾಧಿಕಾರಿಗಳು ಯೋಜನಾ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿರುವ ಪ್ರತಿಯೂ ಸಹ ದೊರೆತಿದ್ದು ಮುಖ್ಯಾಧಿಕಾರಿ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.

ಪುರಸಭೆ ಸಂಹಿತೆ ಪ್ರಕಾರ ಪ್ರಥಮ ಸಭೆಯಿಂದ ಐದು ವರ್ಷಗಳ ಕಾಲ ಆಡಳಿತ ಮಂಡಳಿಯ ಅಧಿಕಾರಾವಧಿ ಇರಲಿದ್ದು ಅಂಕೋಲಾ ಪುರಸಭೆಯ ಪ್ರಥಮ ಸಭೆ 1/11/2020 ರಂದು ನಡೆದು ಆಡಳಿತ ಮಂಡಳಿಯ ಅಧಿಕಾರಾವಧಿ ಪ್ರಾರಂಭವಾಗಿದ್ದು, ಮುಕ್ತಾಯ 1/11/2025 ಕ್ಕೆ ಪೂರ್ಣಗೊಳ್ಳಬೇಕು ,ಆದರೆ ಕರ್ತವ್ಯಲೋಪದಡಿ ಅಮಾನತ್ತುಗೊಂಡ ಮುಖ್ಯಾಧಿಕಾರಿ ಎಚ್ ಅಕ್ಷತಾ ಈ ಹಿಂದೆ ಜಿಲ್ಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದು ಅಧಿಕಾರಾವಧಿ 12/10/2025 ಕ್ಕೆ ಮುಕ್ತಾಯವಾಗಲಿದೆ ಎಂದು ತಪ್ಪು ಮಾಹಿತಿ ನೀಡಿದ್ದರು ಎನ್ನಲಾಗಿದೆ.
ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾ ಆಯೋಗ ತಪ್ಪು ಮಾಹಿತಿ ನೀಡಿರುವ ಕರ್ತವ್ಯಲೋಪದಡಿ ಅಮಾನತ್ತುಗೊಂಡ ಅಕ್ಷತಾ ಎಚ್ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಜನಪ್ರತಿನಿಧಿಗಳ ಒತ್ತಾಸೆಯಾಗಿದೆ.














Leave a Reply