Spread the love

ಅಂಕೋಲಾ:ತಾಲೂಕಿನ ಬೊಬ್ರುವಾಡದ ಕೇದಗಿಯಮ್ಮ ದೇಗುಲದಲ್ಲಿ ಗೆಳೆಯರ ಬಳಗ ಹಾಗೂ ಊರ ನಾಗರಿಕರವತಿಯಿಂದ ಕಾರ್ತಿಕ ಮಾಸದ ಪ್ರಯುಕ್ತ ಸಹಸ್ರಾರು ದೀಪವನ್ನು ಬೆಳಗಿಸುವ ಮೂಲಕ ಮಂಗಳವಾರ  ಕಾರ್ತಿಕ ದೀಪೋತ್ಸವವನ್ನು ಆಚರಿಸಲಾಯಿತು.

ಹೌದು…ಪ್ರತಿವರ್ಷದಂತೆ ಈ ವರ್ಷವೂ ಕೂಡ ಕಾರ್ತಿಕ ಮಾಸದ ಪ್ರಯುಕ್ತ ತಾಲೂಕಿನ ಬೊಬ್ರುವಾಡ ಗ್ರಾಮದಲ್ಲಿಯ ಶಕ್ತಿ ದೇವತೆ ಕೇದಗಿಯಮ್ಮ ದೇಗುಲದಲ್ಲಿ ನವೆಂಬರ್ 18 ಮಂಗಳವಾರದಂದು ಅದ್ದೂರಿ ಕಾರ್ತಿಕ ದೀಪೋತ್ಸವವನ್ನು ಬೆಳಗಿಸಲಾಯಿತು. ನಂತರದಲ್ಲಿ ಮಹಾಪೂಜೆ ನೆರವೇರಿಸಿ ಪ್ರಸಾದವನ್ನು ವಿತರಿಸಿದರು.

ಕಂಗೊಳಿಸಿದ ತಾಯಿ ಕೇದಗಿಯಮ್ಮ!

ದೇಗುಲದ ಆವರಣದ ತುಂಬೆಲ್ಲ ದೀಪಾಲಂಕಾರ,ನೆಲದ ತುಂಬೆಲ್ಲ ರಂಗೋಲಿಯ ಚಿತ್ತಾರ,ಪಂಚವಾದ್ಯಗಳು,ಮದ್ದಲೇಶ್ವರ ಭಜನಾ ಮಂಡಳಿ ಕೇಣಿತಂಡದಿಂದ ಭಕ್ತಿ ಬಾವ ಮೂಡಿಸಿದ ಭಜನೆಯ ಇಂಪು ಒಟ್ಟಾರೆ ಅದ್ದೂರಿ ಅಲಂಕಾರದಿಂದ ಕೇದಗಿಯಮ್ಮ ಕಂಗೊಳಿಸಿದ್ದು, ದೇವಿಯನ್ನು ಕಣ್ತುಂಬಿಕೊಂಡ ಭಕ್ತಗಣ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಪುನೀತರಾದರು.

Leave a Reply

Your email address will not be published. Required fields are marked *