Author: Sandeep Sagar

ಒಂದೇ ದಿನದಲ್ಲಿ ಬಗೆಹರಿದ SSLC ಅಂಕಪಟ್ಟಿ ಗೊಂದಲ: ಶಾಸಕರ ತ್ವರಿತ ಸ್ಪಂದನೆಗೆ ಹರ್ಷ ವ್ಯಕ್ತಪಡಿಸಿದ ಪ್ರತಿಭಾನ್ವಿತ ಅಂಧ ವಿದ್ಯಾರ್ಥಿನಿ

ಶಿರಸಿಯ ಯೂನಿಯನ್ ಪ್ರೌಢಶಾಲೆಯ ವಿದ್ಯಾರ್ಥಿನಿ ಲಿಝಾ ಖಾನಮ್ ಅವರ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿದ್ದ ಗೈರು ಹಾಜರಿ ಗೊಂದಲವನ್ನು ಶಾಸಕ ಭೀಮಣ್ಣ ನಾಯ್ಕ ಅವರ ಮಧ್ಯಪ್ರವೇಶದಿಂದ ಕೇವಲ ಒಂದೇ ದಿನದಲ್ಲಿ ಸರಿಪಡಿಸಲಾಗಿದೆ.

ರಸ್ತೆ ಬದಿ ನಿಲ್ಲಿಸಿದ್ದ ಕಾರುಗಳಿಗೆ ಸಾರಿಗೆ ಬಸ್ ಡಿಕ್ಕಿ, ಸರಣಿ ಅಪಘಾತದಲ್ಲಿ 3 ವಾಹನಗಳು ಜಖಂ!

ಕಾರವಾರದ ಗ್ರೀನ್ ಸ್ಟ್ರೀಟ್ ಮಾರ್ಗದಲ್ಲಿರುವ ಪ್ರೀಮಿಯರ್ ಹೋಟೆಲ್ ಬಳಿ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಸಾರಿಗೆ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ, ಏಕಕಾಲದಲ್ಲಿ ಮೂರು ಬೆಲೆಬಾಳುವ ಕಾರುಗಳು ಜಖಂಗೊಂಡಿವೆ.

ದನಗಳನ್ನು ಕರೆತರಲು ಹಳಿ ದಾಟುತ್ತಿದ್ದಾಗ ದುರಂತ: ರೈಲು ಡಿಕ್ಕಿಯಾಗಿ ವೃದ್ಧೆ ದಾರುಣ ಅಂತ್ಯ

ಭಟ್ಕಳ ತಾಲೂಕಿನ ಮೂಡ ಶಿರಾಲಿ ಬೆಂಗ್ರೆ ಬಳಿ ಮೇಯಲು ಬಿಟ್ಟಿದ್ದ ದನಗಳನ್ನು ಮರಳಿ ಮನೆಗೆ ತರಲು ರೈಲು ಹಳಿ ದಾಟುತ್ತಿದ್ದ 62 ವರ್ಷದ ವೃದ್ಧೆಯೊಬ್ಬರಿಗೆ ರೈಲು ಡಿಕ್ಕಿ ಹೊಡೆದು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

ಕರಾವಳಿಯಲ್ಲಿ ಬಿಸಿಲ ಅಬ್ಬರ: ಮುಂದಿನ 5 ದಿನಗಳ ಕಾಲ ತೀವ್ರ ಬಿಸಿಗಾಳಿಯ ‘ಯೆಲ್ಲೋ ಅಲರ್ಟ್’!

ರಾಜ್ಯದ ಪ್ರಮುಖ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳವರೆಗೆ ಹವಾಮಾನದಲ್ಲಿ ಭಾರಿ ಏರುಪೇರಾಗಲಿದೆ. ಬಿಸಿ ಗಾಳಿಯ ಜೊತೆಗೆ ವಾತಾವರಣದಲ್ಲಿ ತೇವಾಂಶದ ಪ್ರಮಾಣ ಗಣನೀಯವಾಗಿ ಹೆಚ್ಚಾಗುವುದರಿಂದ ಸಾರ್ವಜನಿಕರು ವಿಪರೀತ ಉಷ್ಣಾಂಶ

ಕಣ್ಣಿಲ್ಲದ ವಿದ್ಯಾರ್ಥಿನಿಗೆ ಶಿಕ್ಷಣ ಇಲಾಖೆಯ ಕಣ್ಣುಮುಚ್ಚಾಲೆ: ಪರೀಕ್ಷೆ ಬರೆದರೂ ‘ಗೈರು’ ಎಂದು ಅಂಕಪಟ್ಟಿ, ಘೋರ ಅನ್ಯಾಯ!

ಶಿರಸಿಯ ಯೂನಿಯನ್ ಪ್ರೌಢಶಾಲೆಯ ಅಂಧ ವಿದ್ಯಾರ್ಥಿನಿ ಎಲ್ಲಾ 6 ವಿಷಯಗಳ ಪರೀಕ್ಷೆ ಬರೆದರೂ, ಸಮಾಜ ವಿಜ್ಞಾನ ವಿಷಯದಲ್ಲಿ 'ಗೈರು' (Absent) ಎಂದು ಪರೀಕ್ಷಾ ಮಂಡಳಿ ಎಡವಟ್ಟು ಮಾಡಿದೆ. ಇದನ್ನು ಕೂಡಲೇ ಸರಿಪಡಿಸುವಂತೆ ಪಾಲಕರು ಮತ್ತು ಸಾರ್ವಜನಿಕರು ತೀವ್ರ ಆಗ್ರಹಿಸಿದ್ದಾರೆ.

ದಾಂಡೇಲಿಯ IPM ಮೈದಾನದಲ್ಲಿ ಪ್ರತ್ಯಕ್ಷವಾದ 15 ಅಡಿ ಉದ್ದದ ಬೃಹತ್ ಹೆಬ್ಬಾವು: ಸೆರೆಹಿಡಿದು ಕಾಡಿಗೆ ಬಿಟ್ಟ ಅರಣ್ಯ ಇಲಾಖೆ

ಐಪಿಎಂ ಮೈದಾನದಲ್ಲಿ ಬುಧವಾರ ರಾತ್ರಿ 15 ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಬಳಿಕ ಅರಣ್ಯ ಇಲಾಖೆ ಹಾಗೂ ಉರಗ ತಜ್ಞರು ಅದನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಶಿರಸಿಯಲ್ಲಿ ಮನೆಗಳ್ಳನ ಸೆರೆ: ಬಾಗಿಲು ಮೀಟಿ ಕಳ್ಳತನ ಮಾಡಿದ್ದ ಆರೋಪಿ ಕಂಬಿ ಹಿಂದೆ, ಬಂಗಾರ-ನಗದು ವಶಕ್ಕೆ!

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಭಾರಿ ಮನೆ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು, 21 ವರ್ಷದ ಆರೋಪಿಯನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.

ಶಿರಡಿಕೆರೆ ಗಣಪತಿ ದೇವಸ್ಥಾನದ ಕಳ್ಳತನ ಪ್ರಕರಣ ಪತ್ತೆ; ಓಮ್ನಿ ಕಾರು ಸಮೇತ ಪಾತ್ರೆ ವ್ಯಾಪಾರಿ ಬಂಧನ

ದೇವಸ್ಥಾನದಲ್ಲಿದ್ದ ಸುಮಾರು 19,900 ರೂ. ಮೌಲ್ಯದ ಹಿತ್ತಾಳೆಯ ಗಂಟೆಗಳು, ತಾಮ್ರದ ಕೊಡ, ಕೈ ಆರತಿಗಳು, ದೀಪಗಳು ಸೇರಿದಂತೆ ಪೂಜಾ ಸಾಮಗ್ರಿಗಳನ್ನು ದೋಚಲಾಗಿತ್ತು. ಈ ಬಗ್ಗೆ 68 ವರ್ಷದ ರೈತ ಶಿವರಾಮ ಕೃಷ್ಣ ಭಟ್ಟ ಅವರು ನೀಡಿದ ದೂರಿನ ಮೇರೆಗೆ

Murder Attempt Case | ‘ಕೆಲಸದಿಂದ ತೆಗೆದಿದ್ದಕ್ಕೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ’: ಕೊಲೆಗೆ ಯತ್ನಿಸಿದ ಆರೋಪಿಗೆ 6 ತಿಂಗಳ ಜೈಲು ಶಿಕ್ಷೆ

ಕೆಲಸದಿಂದ ತೆಗೆದುಹಾಕಿದ ದ್ವೇಷದ ಹಿನ್ನೆಲೆಯಲ್ಲಿ ಕತ್ತಿ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ ಸಿದ್ದಾಪುರ ತಾಲೂಕಿನ ಆರೋಪಿಗೆ ಜಿಲ್ಲಾ ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.