Spread the love

ಕಾರವಾರ: ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ನಡುವೆ ಸಾರ್ವಜನಿಕರಿಗೆ ಸೈಬರ್ ವಂಚಕರ ಕಾಟ ಶುರುವಾಗಿದ್ದು, ಈ ಬಗ್ಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (Karnataka State Police) ಮಹತ್ವದ ಎಚ್ಚರಿಕೆ ಸಂದೇಶ ರವಾನಿಸಿದೆ.

ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು, ಉಚಿತ ಗಿಫ್ಟ್ (ಉಡುಗೊರೆ) ಕೊಡುಗೆಗಳು ಹಾಗೂ ಉಚಿತ ಮೊಬೈಲ್ ರಿಚಾರ್ಜ್ ಆಮಿಷವೊಡ್ಡುವ ನಕಲಿ ಲಿಂಕ್‌ಗಳು ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಇಂತಹ ಯಾವುದೇ ಅನುಮಾನಾಸ್ಪದ ಅಥವಾ ಅಪರಿಚಿತ ಲಿಂಕ್‌ಗಳನ್ನು ಸಾರ್ವಜನಿಕರು ಆಮಿಷಕ್ಕೆ ಒಳಗಾಗಿ ಕ್ಲಿಕ್ ಮಾಡಬಾರದು ಎಂದು ಪೊಲೀಸರು ಕಟ್ಟುನಿಟ್ಟಾಗಿ ಎಚ್ಚರಿಸಿದ್ದಾರೆ.

ಈ ನಕಲಿ ಲಿಂಕ್‌ಗಳನ್ನು ಕ್ಲಿಕ್ ಮಾಡುವುದರಿಂದ ನಿಮ್ಮ ಮೊಬೈಲ್‌ನಲ್ಲಿರುವ ಖಾಸಗಿ ಮಾಹಿತಿ ಕದಿಯಲ್ಪಡುವ ಹಾಗೂ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಅಪಾಯವಿರುತ್ತದೆ. ಹೀಗಾಗಿ, ಯಾವುದೇ ಸಂದೇಶ ಬಂದರೂ ‘ಕ್ಲಿಕ್ ಮಾಡುವ ಮುನ್ನ ಯೋಚಿಸಿ’ (Think Before You Click), ಸೈಬರ್ ವಂಚಕರಿಂದ ಸದಾ ಎಚ್ಚರದಿಂದಿರಿ ಎಂದು ಪೊಲೀಸ್ ಇಲಾಖೆ ಜಾಗೃತಿ ಮೂಡಿಸಿದೆ.

Leave a Reply

Your email address will not be published. Required fields are marked *