Spread the love

ಕಾರವಾರ: ​ಉಡುಪಿಯ ಮಣಿಪಾಲದಲ್ಲಿರುವ ಕೆ.ಎಂ.ಸಿ.ಯಲ್ಲಿ (KMC) ಇತ್ತೀಚೆಗೆ ನಡೆದ 8ನೇ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ–2026 ರಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ಸಿಬ್ಬಂದಿ ಅತ್ಯುತ್ತಮ ಸಾಧನೆ ಮೆರೆದಿದ್ದಾರೆ.

ಇಲಾಖೆಯನ್ನು ಪ್ರತಿನಿಧಿಸಿ ವಿವಿಧ ವಿಭಾಗಗಳಲ್ಲಿ ಭಾಗವಹಿಸಿದ್ದ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ತಮ್ಮ ಕರ್ತವ್ಯನಿಷ್ಠೆ, ವೃತ್ತಿಪರ ಕೌಶಲ್ಯ ಹಾಗೂ ಅತ್ಯುತ್ತಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ನಾಲ್ಕು ಪ್ರಮುಖ ವಿಭಾಗಗಳಲ್ಲಿ ಪ್ರಥಮ ಸ್ಥಾನ ಹಾಗೂ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

​ಪ್ರಥಮ ಸ್ಥಾನ ಪಡೆದ ಸಾಧಕರ ವಿವರ

​ತಮ್ಮ ಕೌಶಲ್ಯದ ಮೂಲಕ ಜಿಲ್ಲಾ ಪೊಲೀಸ್ ಇಲಾಖೆಯ ಕೀರ್ತಿಯನ್ನು ಹೆಚ್ಚಿಸಿದ ಈ ಕೆಳಕಂಡ ಸಾಧಕರಿಗೆ ಇಲಾಖೆಯ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಗಿದೆ:

  • ​ಕಂಪ್ಯೂಟರ್ ಜಾಗೃತಿ (Computer Awareness): ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಸಿ.ಹೆಚ್.ಸಿ–644 ರೋನಿ ಅಲ್ಮೇಡಾ.
  • ​ಪೊಲೀಸ್ ಫೋಟೋಗ್ರಫಿ/ವಿಡಿಯೋಗ್ರಫಿ (Police Photography/Videography): ಕಾರವಾರ ಡಿ.ಎ.ಆರ್. (DAR) ವಿಭಾಗದ ಎ.ಪಿ.ಸಿ–78 ಲಕ್ಷ್ಮಣ ಲಮಾಣಿ.
  • ​ವೈಜ್ಞಾನಿಕ ತನಿಖಾ ನೆರವು (Scientific aids to Investigation): ಕಾರವಾರ ಸಂಚಾರ ಪೊಲೀಸ್ ಠಾಣೆಯ ಸಿ.ಪಿ.ಸಿ–921 ಸತ್ಯಾನಂದ.
  • ​ಆಂಟಿ ಸಬೋಟೇಜ್ ಚೆಕ್ (Anti Sabotage check): ಕಾರವಾರ ಡಿ.ಎ.ಆರ್. ವಿಭಾಗದ ಎ.ಪಿ.ಸಿ–65 ಈರಣ್ಣ ಕೆಳಗಿನಮನಿ.

Leave a Reply

Your email address will not be published. Required fields are marked *