ಅಂಕೋಲಾ: ವಿಜ್ಞಾನ ಎಂದರೆ ಕೇವಲ ಪಾಠವಲ್ಲ, ಅದರಲ್ಲಿ ಬಹಳ ಹೊಸತನದ ಚಿಂತನೆಯಿದೆ. ಹಾಗೆಯೇ ಅದನ್ನ ಹೇಗೆ ಅಳವಡಿಸಿಕೊಳ್ಳಬೇಕು ಎನ್ನುವುದರ ಜೊತೆಗೆ ಮಕ್ಕಳು ತಯಾರಿಸಿದ ವಿಭಿನ್ನ ರೀತಿಯ ಮಾದರಿಗಳನ್ನು ನೋಡಿದಾಗ ತುಂಬಾ ಮನಮುಟ್ಟಿತು ಎಂದು ಪಿ.ಎಮ್. ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ವಿಜ್ಞಾನ ಶಿಕ್ಷಕ ಪ್ರಕಾಶ್ ಮಲ್ಯ ಹೇಳಿದರು.

ಅವರು ಪೂರ್ಣ ಪ್ರಜ್ಞಾ ಗ್ಲೋಬಲ್ ಸ್ಕೂಲ್ ಆಫ್ ಎಕ್ಸೆಲೆನ್ಸ್ ಶಾಲೆಯಲ್ಲಿ ವಿಜ್ಞಾನ ದಿನಾಚರಣೆಯ ಅಂಗವಾಗಿ ವಿಜ್ಞಾನ ವೈಭವಂ, ವಿಜ್ಞಾನ ಪ್ರದರ್ಶನ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಡಾ. ಶ್ರೇಯಾಂಕ ನಾಯಕ್ ಪಾಲ್ಗೊಂಡು ಮಕ್ಕಳಿಗೆ ಸಂಪೂರ್ಣವಾಗಿ ಜಂಕ್ ಫುಡ್ ನ್ನು ತಡೆದು ಆರೋಗ್ಯಕರ ಆಹಾರ ಪದ್ಧತಿಯನ್ನು ಪಾಲಕರು ಅನುಸರಿಸಬೇಕು. ಇದರಿಂದ ಮಕ್ಕಳಿಗೆ ಉತ್ತಮ ಆಹಾರ ಅಭ್ಯಾಸಗಳು ಬೆಳೆದೀತು, ಎಂದು ಆರೋಗ್ಯಕರ ಆಹಾರ ಪದ್ಧತಿಯ ಬಗ್ಗೆ ಮಾತನಾಡಿದರು.

ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಸೇರಿ ತಾವು ತಯಾರಿಸಿದ ವಿಜ್ಞಾನದ ಮಾದರಿಯನ್ನು ಪ್ರದರ್ಶಿಸಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಶಾಂತ್ ನಾಯಕ,ಕಾರ್ಯದರ್ಶಿ ಕೀರ್ತಿ ನಾಯಕ್ ರವರು ಮಾತನಾಡಿದರು. ಶಾಲೆಯ ವಿಧ್ಯಾರ್ಥಿಗಳು ಶಿಕ್ಷಕರು ಪಾಲಕ ಪೋಷಕರು, ಕಾಲೇಜು ವಿಧ್ಯಾರ್ಥಿಗಳು ಅಂಕೋಲೆಯ ಸುತ್ತಮುತ್ತಲಿನ ಎಲ್ಲಾ ನಾಗರಿಕರು ಪಾಲ್ಗೊಂಡು ಚಿಕ್ಕ ಮಕ್ಕಳು ಶ್ರಮವಹಿಸಿ ಮಾಡಿದ ಎಲ್ಲಾ ವಿಜ್ಞಾನ ವಸ್ತು ಪ್ರದರ್ಶನ ನೋಡಿ ಪುಳಕಿತರಾದರು.ಕಾರ್ಯಕ್ರಮವನ್ನು ಮೇಘನಾ ನಾಯಕ ಸ್ವಾಗತಿಸಿದರೆ, ತಮನ್ನಾ ಖಾನ್ ನಿರೂಪಿಸಿದರು.


