ಶಾಲಾ ಆವರಣದಲ್ಲೇ ಅಪಾಯಕಾರಿ ಬೃಹತ್ ಮರ: ತೆರವಿಗೆ ಅರಣ್ಯ ಇಲಾಖೆ ನಿರ್ಲಕ್ಷ್ಯ ಆರೋಪ!

ಯಲ್ಲಾಪುರದ ರವೀಂದ್ರನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಅಪಾಯಕಾರಿ ಬೃಹತ್ ಮರವನ್ನು ತೆರವುಗೊಳಿಸುವಂತೆ ಹತ್ತಾರು ಬಾರಿ ಮನವಿ ಮಾಡಿದರೂ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದ್ದು, 52 ವಿದ್ಯಾರ್ಥಿಗಳ ಜೀವಕ್ಕೆ ಆತಂಕ ಎದುರಾಗಿದೆ.

ಕದ್ರಾ ಪೊಲೀಸರ ಕಾರ್ಯಾಚರಣೆ: 23 ದಿನಗಳ ಹಿಂದೆ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕ ಬಾಗಲಕೋಟೆಯಲ್ಲಿ ಪತ್ತೆ!

ಕಾರವಾರ ತಾಲೂಕಿನ ಕದ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ಟೋಬರ್ 5ರಂದು ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕನನ್ನು ಬಾಗಲಕೋಟೆಯಲ್ಲಿ ಸುರಕ್ಷಿತವಾಗಿ ಪತ್ತೆಹಚ್ಚುವಲ್ಲಿ ಕದ್ರಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಮದರಸಾದಲ್ಲಿ ಶುರುವಾದ ಪ್ರೇಮ: ವಿವಾಹಿತ ಧರ್ಮಗುರುವಿನೊಂದಿಗೆ ಓಡಿಹೋದ ಕುಮಟಾದ ಯುವತಿ!

ಕುಮಟಾದ ಮದರಸಾವೊಂದರಲ್ಲಿ ಧರ್ಮಗುರುವಾಗಿ ಕೆಲಸ ಮಾಡುತ್ತಿದ್ದ ಮಂಗಳೂರು ಮೂಲದ ವಿವಾಹಿತ ವ್ಯಕ್ತಿಯೊಂದಿಗೆ 22 ವರ್ಷದ ಯುವತಿ ಓಡಿಬಂದಿದ್ದಾಳೆ. ಪೋಷಕರು ಎಷ್ಟೇ ಕಾಡಿಬೇಡಿದರೂ, ಕೊಣಾಜೆ ಠಾಣೆಯಲ್ಲಿ ಪೊಲೀಸರ ಸಮ್ಮುಖದಲ್ಲೇ ಆಕೆ ಧರ್ಮಗುರುವಿನೊಂದಿಗೆ ತೆರಳಿದ್ದಾಳೆ.

ಅಬಕಾರಿ ಅಧಿಕಾರಿಗಳಿಗೆ ಬ್ಲಾಕ್‌ಮೇಲ್: ದೂರು ವಾಪಸ್ ಪಡೆಯಲು 10 ಲಕ್ಷ ರೂ.ಗೆ ಬೇಡಿಕೆ!

ಅನಮೋಡ ಅಬಕಾರಿ ಠಾಣೆ ಅಧಿಕಾರಿಗಳಿಗೆ ಬ್ಲಾಕ್‌ಮೇಲ್ ಮಾಡಿ, ದೂರು ವಾಪಸ್ ಪಡೆಯಲು 10 ಲಕ್ಷ ರೂ. ಹಣಕ್ಕೆ ಬೇಡಿಕೆಯಿಟ್ಟಿದ್ದಲ್ಲದೆ, ಸುಳ್ಳು ಜಾತಿ ನಿಂದನೆ ಕೇಸು ದಾಖಲಿಸುವ ಬೆದರಿಕೆಯೊಡ್ಡಿದ ಬೆಳಗಾವಿ ಮೂಲದ ವ್ಯಕ್ತಿಯ ವಿರುದ್ಧ ರಾಮನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್‌ನ ಮೋಹನ ಲಿಂಬಿಕಾಯಿ ಮಣಿಸಿ ಎಸ್.ವಿ.ಸಂಕನೂರ ಭರ್ಜರಿ ಜಯ​

S.V. Sankanur has emerged victorious in the 2026 biennial election for the Karnataka Legislative Council's West Graduates' constituency. Securing 33,711 first-preference votes, he defeated Congress candidate Mohan Limbikai by a…

ಒಂಟಿ ವೃದ್ಧೆಯ ಭೀಕರ ಹ*ತ್ಯೆ; 30 ಗ್ರಾಂ ಚಿನ್ನ, 1.70 ಲಕ್ಷ ರೂ. ನಗದು ದೋಚಿದ ದುಷ್ಕರ್ಮಿಗಳು!

ಮುಂಡಗೋಡ ತಾಲೂಕಿನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ 75 ವರ್ಷದ ವೃದ್ಧೆಯನ್ನು ಭೀಕರವಾಗಿ ಹತ್ಯೆಗೈದ ದುಷ್ಕರ್ಮಿಗಳು, ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

ದನದ ಕೊಟ್ಟಿಗೆಗೆ ನುಗ್ಗಿ ಕರುವನ್ನು ಬಲಿಪಡೆದ ಚಿರತೆ; ಆತಂಕದಲ್ಲಿ ಎಡ್ತಾರೆ ಗ್ರಾಮಸ್ಥರು!

ಉತ್ತರ ಕನ್ನಡ ಜಿಲ್ಲೆಯ ಎಡ್ತಾರೆ ಗ್ರಾಮದಲ್ಲಿ ಆಹಾರ ಅರಸಿ ಬಂದ ಚಿರತೆಯೊಂದು ಕೊಟ್ಟಿಗೆಗೆ ನುಗ್ಗಿ ಕರುವನ್ನು ಕೊಂದು ಹಾಕಿದೆ. ಗ್ರಾಮದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಸ್ಥಳೀಯರು ಆಗ್ರಹಿಸಿದ್ದಾರೆ.

ಅಸ್ನೋಟಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕನ 1.48 ಲಕ್ಷ ರೂ. ಮೌಲ್ಯದ ವಸ್ತುಗಳ ಕಳ್ಳತನ

ಕಾರವಾರ ತಾಲೂಕಿನ ರೈಲ್ವೆ ನಿಲ್ದಾಣದಲ್ಲಿ ರೈಲು ನಿಂತಿದ್ದ ವೇಳೆ ಪ್ರಯಾಣಿಕನ 1.48 ಲಕ್ಷ ರೂ. ಮೌಲ್ಯದ ವಸ್ತುಗಳಿದ್ದ ಬ್ಯಾಗ್‌ ಅನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ. ಗೋವಾದಲ್ಲಿ ಝೀರೋ ಎಫ್‌ಐಆರ್ ದಾಖಲಾದ ಬಳಿಕ ಪ್ರಕರಣ ಇದೀಗ ಕಾರವಾರದ ಚಿತ್ತಾಕುಲ ಠಾಣೆಗೆ ವರ್ಗಾವಣೆಯಾಗಿದೆ.