ಕಣ್ಣಿಲ್ಲದ ವಿದ್ಯಾರ್ಥಿನಿಗೆ ಶಿಕ್ಷಣ ಇಲಾಖೆಯ ಕಣ್ಣುಮುಚ್ಚಾಲೆ: ಪರೀಕ್ಷೆ ಬರೆದರೂ ‘ಗೈರು’ ಎಂದು ಅಂಕಪಟ್ಟಿ, ಘೋರ ಅನ್ಯಾಯ!
ಶಿರಸಿಯ ಯೂನಿಯನ್ ಪ್ರೌಢಶಾಲೆಯ ಅಂಧ ವಿದ್ಯಾರ್ಥಿನಿ ಎಲ್ಲಾ 6 ವಿಷಯಗಳ ಪರೀಕ್ಷೆ ಬರೆದರೂ, ಸಮಾಜ ವಿಜ್ಞಾನ ವಿಷಯದಲ್ಲಿ 'ಗೈರು' (Absent) ಎಂದು ಪರೀಕ್ಷಾ ಮಂಡಳಿ ಎಡವಟ್ಟು ಮಾಡಿದೆ. ಇದನ್ನು ಕೂಡಲೇ ಸರಿಪಡಿಸುವಂತೆ ಪಾಲಕರು ಮತ್ತು ಸಾರ್ವಜನಿಕರು ತೀವ್ರ ಆಗ್ರಹಿಸಿದ್ದಾರೆ.
