ಅಂಕೋಲಾ ಪುರಸಭೆಯಲ್ಲಿ ಪೌರಕಾರ್ಮಿಕರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ನಡೆದ ಲಕ್ಷ್ಮೀ ಪೂಜೆ

Spread the love

ಅಂಕೋಲಾ:ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಅದ್ದೂರಿಯಿಂದ ಆಚರಿಸಲಾಗುತ್ತಿದೆ,ಅದರಂತೆಯೇ ಅಂಕೋಲಾ ಪುರಸಭೆ ಕಚೇರಿಯಲ್ಲಿಯೂ ಸಹ ಮಂಗಳವಾರ ಬೆಳಗ್ಗೆ ಪೌರಕಾರ್ಮಿಕರ ನೇತೃತ್ವದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರು, ಸರ್ವಸದಸ್ಯರು ಹಾಗೂ ಸಿಬ್ಬಂದಿಗಳು ಅದ್ದೂರಿಯಿಂದ ಲಕ್ಷ್ಮೀ ಪೂಜೆಯನ್ನು ಹಮ್ಮಿಕೊಂಡರು.

ಲಕ್ಷ್ಮೀ ಪೂಜೆಯಲ್ಲಿ ಪುರಸಭೆಯ ವಾಹನಗಳು,ಯಂತ್ರೋಪಕರಣಗಳಿಗೆ ಪೂಜೆ ಸಲ್ಲಿಸಲಾಯಿತು,ನಂತರದಲ್ಲಿ ಪುರಸಭೆಯ ಎಲ್ಲಾ ಸಿಬ್ಬಂದಿಗಳು,ಜನಪ್ರತಿನಿಧಿಗಳು, ಪೌರಕಾರ್ಮಿಕರು ಉಪಸ್ಥಿತರಿದ್ದು, ಪರಸ್ಪರರ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದರು.

ಪೌರ ಕಾರ್ಮಿಕರಿಗೆ ಹಬ್ಬದ ಉಡುಗೊರೆ ನೀಡಿದ ಅಧ್ಯಕ್ಷರು.

ದೀಪಾವಳಿ ಹಬ್ಬದ ಪ್ರಯುಕ್ತ ಪ್ರತಿವರ್ಷದಂತೆ ಈ ವರ್ಷವೂ ಕೂಡ ಪೌರ ಕಾರ್ಮಿಕರಿಗೆ ಪುರಸಭೆ ಅಧ್ಯಕ್ಷ ಸೂರಜ್ ನಾಯ್ಕ ಹಬ್ಬದ ಉಡುಗೊರೆಯನ್ನು ನೀಡಿದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಶೀಲಾ ಎಂ ಶೆಟ್ಟಿ,ಸದಸ್ಯರಾದ,ಶಾಂತಲಾ ನಾಡಕರ್ಣಿ, ಜಯಾ ಬಾಲಕೃಷ್ಣ ನಾಯ್ಕ, ಅಶೋಕ್ ಶೇಡಗೇರಿ,ವಿಶ್ವನಾಥ್ ನಾಯ್ಕ,ಜಯಪ್ರಕಾಶ್ ನಾಯ್ಕ,ತಾರಾ ನಾಯ್ಕ,ನಾಗಪ್ಪ ಗೌಡ,ಸವಿತಾ ನಾಯಕ,ಶ್ರೀಧರ್ ನಾಯ್ಕ,ಶಬ್ಬಿರ್ ಶೇಖ್ ಮುಂತಾದವರು ಕೈಜೋಡಿಸಿದರು.

ನಾಡಿನ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು,ದೇವರು ಸಕಲರಿಗೂ ಸಕಲ ಸಂಪತ್ತು,ಆರೋಗ್ಯ-ಆಯಸ್ಸನ್ನು ನೀಡಲಿ ಎಂದು ಬೇಡಿಕೊಳ್ಳುತ್ತೇನೆ.

ಸೂರಜ್ ಎಂ ನಾಯ್ಕ

ಅಧ್ಯಕ್ಷರು,ಪುರಸಭೆ ಅಂಕೋಲಾ

Leave a Reply

Your email address will not be published. Required fields are marked *