Month: October 2026

ಪಶ್ಚಿಮ ಪದವೀಧರ ಕ್ಷೇತ್ರ: KKKSPಯಿಂದ ಮಲ್ಲಿಕಾರ್ಜುನ ಗಂಗಾಧರ ಕಣಕ್ಕೆ; ಉದ್ಯೋಗ, ಉತ್ತರ ಕನ್ನಡ ಅಭಿವೃದ್ಧಿಗೆ ಆದ್ಯತೆ

ಕಾರವಾರ: ಪದವೀಧರರ ಹಕ್ಕುಗಳ ರಕ್ಷಣೆ, ಯುವಜನರಿಗೆ ಉದ್ಯೋಗಾವಕಾಶ ಹಾಗೂ ಉತ್ತರ ಕನ್ನಡ ಸೇರಿದಂತೆ ಕಿತ್ತೂರು ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು, ಕಿತ್ತೂರು ಕಲ್ಯಾಣ ಕರ್ನಾಟಕ ಸೇನಾ ಪಕ್ಷದ (KKKSP) ಅಧಿಕೃತ ಅಭ್ಯರ್ಥಿ ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ ಅವರು ಪಶ್ಚಿಮ…

ಪ್ಲಾಸ್ಟಿಕ್ ವಿರುದ್ಧ ‘ಕೋಸ್ಟಲ್ ಅಂಡ್ ಮರೈನ್ ಇಕೋ ಸಿಸ್ಟಮ್ ಘಟಕ’ದ ಸಮರ: 4,000 ಟನ್ ತ್ಯಾಜ್ಯ ಸಂಗ್ರಹ, ಪರಿಸರ ಸಂರಕ್ಷಣೆಗೆ ಕೊಡುಗೆ

ಕಾರವಾರದ ಮಾಜಾಳಿಯಿಂದ ಅಂಕೋಲಾವರೆಗಿನ ಕರಾವಳಿಯಲ್ಲಿ ಅರಣ್ಯ ಇಲಾಖೆಯ 'ಕೋಸ್ಟಲ್ ಅಂಡ್ ಮರೈನ್ ಇಕೋ ಸಿಸ್ಟಮ್' ಘಟಕವು ಕೇವಲ 22 ದಿನಗಳ ಕಾರ್ಯಾಚರಣೆಯಲ್ಲಿ ಬರೋಬ್ಬರಿ 4,000 ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಸಾಧನೆ ಮಾಡಿದೆ.

‘ಡ್ರಗ್ಸ್ ಫ್ರೀ ಇಂಡಿಯಾ’ ರಾಷ್ಟ್ರೀಯ ಬೈಕ್ ರ‍್ಯಾಲಿಗೆ ಕಾರವಾರದಲ್ಲಿ ಸ್ವಾಗತ: ಮಾದಕ ದ್ರವ್ಯಗಳ ವಿರುದ್ಧ ಜಾಗೃತಿಗೆ CEO ಕರೆ!

ಸ್ನೇಹಿತರ ಒತ್ತಡಕ್ಕೆ ಒಳಗಾಗಿ ಮದ್ಯಪಾನ, ಸಿಗರೇಟ್ ಅಥವಾ ಇತರ ಮಾದಕ ವಸ್ತುಗಳನ್ನು ಸೇವಿಸುವುದು ಧೈರ್ಯ ಅಥವಾ ಶೌರ್ಯದ ಸಂಕೇತವಲ್ಲ. ಇಂತಹ ಆಮಿಷಗಳು ಆರಂಭದಲ್ಲಿ ತಾತ್ಕಾಲಿಕ ಸಂತೋಷ ನೀಡಿದರೂ, ಕ್ರಮೇಣ ವ್ಯಸನಕ್ಕೆ ದೂಡಿ ಶಿಕ್ಷಣ, ಉದ್ಯೋಗ, ಕುಟುಂಬ ಹಾಗೂ ವೈಯಕ್ತಿಕ ಜೀವನವನ್ನು ಹಾಳುಮಾಡುತ್ತದೆ.

ಕಡವೆ ಬೇಟೆಯಾಡಿ ಮಾಂಸ ಪಾಲು ಮಾಡುತ್ತಿದ್ದಾಗ ಅರಣ್ಯ ಇಲಾಖೆ ದಾಳಿ: ಓರ್ವನ ಬಂಧನ, ಐವರಿಗಾಗಿ ಶೋಧ!

ಅಂಕೋಲಾ ತಾಲೂಕಿನ ಕಲ್ಲೇಶ್ವರ ಗ್ರಾಮದಲ್ಲಿ ಕಡವೆಯನ್ನು ಬೇಟೆಯಾಡಿ ಮಾಂಸವನ್ನು ಚೀಲಗಳಿಗೆ ತುಂಬುತ್ತಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿ ದಿಢೀರ್ ದಾಳಿ ನಡೆಸಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಪರಾರಿಯಾಗಿರುವ ಇತರ ಐವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.